ಕಲಾ-ಮಂಥನ
ಕೂಡಿಟ್ಟ ನೆನಪುಗಳ ಅನಾವರಣ - ನನ್ನೊಳಗಿನ ಸುನೀತಗಳ ಅನ್ವೇಷಣ
25 May 2020
02 February 2020
01 February 2020
ಧೀರ ಮಹಿಳೆ…..
ಅರಿಯಲಾಗದ ಜಗದಲಿ ಗುರುವಾಗಿ ಬಂದಳಿಕೆ
ಮರಳುಗಾಡಿನಲಿ ಮರಿಚಿಕೆಯ0ತೆ ಕಂಡಳಿಕೆಬಯಲು ಸೀಮೆಯ ನಡುವೆ ನೀರಾಗಿ ಹರಿದಳಿಕೆ
ಬಾಯ್ಬಿರಿದ ಮರಭೂಮಿಯಲಿ ಹಸಿರಾಗಿ ನಿಂತಳಿಕೆ
ಜಗ ಕಾಣುವ ಹೊಸಜೀವಕೆ ಆದಿ ಈ ತಾಯಿ
ತನ್ನ ಕ0ದನ ಬೆಳೆಸಲು ತನ್ನೆ ಮರೆತ ಆಯಿ
ಇವಳ ನೆರಳಿನಲಿ ಬೀಜವಾಗುತಿರೆ ಹಸಿಗಾಯಿ
ತಾಯಪ್ರೀತಿಯಲಿ ಮನದು:ಖವೆಲ್ಲ ಮಾಯಿ
ಗಂಡನ ಜೊತೆಯಾಗಿ ಅನಿಸಿದಳಿಕೆ ಹೆಂಡತಿ
ಪತಿ-ಪ್ರಗತಿಗಾಗಿ ಹೆಗಲು ನೀಡಿದಳೀ ಸತಿ
ಕೆಲವೊಮ್ಮೆ ಎಲ್ಲರಿಂದ ಮುಚ್ಚಿಟ್ಟು ತನ್ನ ಉನ್ನತಿ
ಮಗ್ನಳಾಗುವಳು ಆದರಿಸಲು ಅತಿಥಿ
ಜನಿಸಿದಳಿಕೆ ಮಗಳಾಗಿ,ಅಣ್ಣನಿಗಾದಳು ತಂಗಿ
ತಮ್ಮನಿಗಾದಳಿಕೆ ಅಕ್ಕ ತೊರಿಸುತ್ತಾ ಬಿನ್ನ ಭಂಗಿ
ಮನೆಗೆ ಸೊಸೆಯಾಗಿ-ಅಳಿಯನಿಗಾದಳಿಕೆ ಅತ್ತೆ
ಬೆಳೆಯುತಾ ತನ್ನ ಸುತ್ತ ಸಂಬಂಧಗಳ ಮತ್ತೆ-ಮತ್ತೆ
ಜಗನಿಯಮಗಳ ಅನುಭವಿಸುತ್ತ ಬೆಳೆಯುತಿರೆ ಹೆಣ್ಣುತೆಳೆ
ಇವಳ ನಿಲುಮೆಯಲಿ ಚಂದಸಾಗುತಿರೆ ಬಾಳೆ
ಎಂದಿಗೂ ಅಲ್ಲ ಹೆಣ್ಣು ಅನಾಗರಿಕ ತಿಳಿಯದ ಹಸುಳೆ
ಪುರುಷನಿಗೆ ಸಮನಾಗಿ ಬೆಳೆಯುತಿರುವ ಧೀರ-ಮಹಿಳೆ
- ಸುನಿತಾ
ರೀಲ್ ರೀಯಲ್ ಆದಾಗ…….
ಸಮೂಹ ಮಾಧ್ಯಮದ ಜೊತೆ ಸೋಲಿರದ ಸಂಬಂಧ ಬೆಸೆಯುತ್ತಾ, ಮಾನವ ತನ್ನ ಜನಾಂಗದ ಸಂಬಂಧಗಳನ್ನು ಬೆಳೆಸುತ್ತಿದ್ದಾನೆ. ಸಮೂಹಮಾಧ್ಯಮಗಳು ಸಹಜತೆ ಮತ್ತು ಅಸಹಜತೆಯ ಚಿತ್ರಗಳನ್ನು ಮನಮುಟ್ಟುವಂತೆ ಪ್ರೇಕ್ಷಕರನ್ನು ರಂಜಿಸುತ್ತವೆ. ನೈಜಕಥೆ ಆಧಾರಿತ ಚಿತ್ರಗಳಂತೂ ನೋಡುಗರ ಕಣ್ಣರಳಿಸುತ್ತವೆ.ಈ ರೀಲ್ ಮತ್ತು ರೀಯಲ ಕಥೆಗಳು ಕೆಲವರ ಬಾಳಿನಲ್ಲಿ ಮಾದರಿಯಾದರೆ ಇನ್ನೊಬ್ಬರ ಜೀವನದಲ್ಲಿ ಕಂಟಕವಾಗಿ ಉಳಿದು ಬಿಡುತ್ತವೆ.
Subscribe to:
Posts (Atom)
-
ಅರಿಯಲಾಗದ ಜಗದಲಿ ಗುರುವಾಗಿ ಬಂದಳಿಕೆ ಮರಳುಗಾಡಿನಲಿ ಮರಿಚಿಕೆಯ0ತೆ ಕಂಡಳಿಕೆ ಬಯಲು ಸೀಮೆಯ ನಡುವೆ ನೀರಾಗಿ ಹರಿದಳಿಕೆ ಬಾಯ್ಬಿರಿದ ಮರಭೂಮಿಯಲಿ ಹಸಿರಾಗಿ ನಿಂತಳಿಕೆ ...
-
ನಮ್ಮ ದೇಶ ಭಾರತ ಎಂದು ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ. ಹೆಮ್ಮೆಗೆ ಕಾರಣವಾದ ವಿಷಯಗಳು ಹಲವು. ಭಾರತದ ಸಂಕೃತಿ, ಕಲೆ, ಸಂಪ್ರದಾಯ, ಇತಿಹಾಸ, ನೈಸರ್ಗಿಕ ಸೌಂದರ್ಯ ಇತ...
-
ಸಮೂಹ ಮಾಧ್ಯಮದ ಜೊತೆ ಸೋಲಿರದ ಸಂಬಂಧ ಬೆಸೆಯುತ್ತಾ, ಮಾನವ ತನ್ನ ಜನಾಂಗದ ಸಂಬಂಧಗಳನ್ನು ಬೆಳೆಸುತ್ತಿದ್ದಾನೆ. ಸಮೂಹಮಾಧ್ಯಮಗಳು ಸಹಜತೆ ಮತ್ತು ಅಸಹಜತೆಯ ಚಿತ್ರಗಳನ...