ಶೀರ್ಷಿಕೆ ನೋಡಿ ಆಶ್ಚರ್ಯವಾಗಬಹುದು, ಒಂದು ನಿಮಿಷ ಯೋಚಿಸಲೂಬಹುದು ಅಲ್ಲವೇ !!
ತಿಳಿದವರು ಹೇಳುತ್ತಾರೆ- ತಮ್ಮ,,, ಬಾಳೊಂದು ಲೆಕ್ಕ, ಅದ ಅರಿ ನೀ ಪಕ್ಕಾ. ಕೂಡು- ಕಳೆ , ಗುಣಾಕಾರ - ಭಾಗಾಕಾರ ಎಲ್ಲದರ ಮೊತ್ತ ಸರಿಯಾಗಿರಬೇಕು. ಇಲ್ಲಿ ಲೆಕ್ಕದ ವಿಚಾರ ಏಕೆ ಬಂತೆಂದರೆ, ಈ ಮೇಲಿನ ಎರಡು - ಸೊನ್ನೆಗಳು ನಾ-ಹೆಚ್ಚು, ನೀ-ಕಡಿಮೆ ಎಂದು ತಾರತಮ್ಯ ಮಾಡುತ್ತಿವೆ. ಜವಾಬ್ದಾರಿವಹಿಸಿ ಕೆಲಸ ಮಾಡುವುದು ಎರಡರ ಗುಣ, ಆಲಸಿಯಾಗಿರುವುದು ಸೊನ್ನೆಯ ಗುಣ. ಯಾವುದಕ್ಕಾಗಿ ಈ ಜಗಳ ಎಂದು ತಿಳಿದಾಗ, ಸಾಲಿನಲ್ಲಿ ಹೋಗುವಾಗ ಸೊನ್ನೆ ತನ್ನ ಹಿಂದೆ ಬರಬೇಕು ಎಂಬುದು ಎರಡರ ವಾದ. ಎಲ್ಲರಿಗಿಂತ ನಾ ಸಾಲಿನ ಮುಂದಿರಬೇಕು ಎಂಬುದು ಸೊನ್ನೆಯ ವಾದ. ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಎರಡು ಮತ್ತು ಸೊನ್ನೆ ತಮ್ಮ ಸ್ನೇಹಿತನ್ನು ಕರೆದರು. ಎರಡರ ಸ್ನೇಹಿತ ಎರಡು, ಸೊನ್ನೆಯ ಸ್ನೇಹಿತ ಸೊನ್ನೆ. ನಾಲ್ವರು ಸೇರಿ ಸಂಖ್ಯಾಪಂಡಿತನ ಹತ್ತಿರ ಹೋದರು, ಅವರಿಗೆ ತಮ್ಮ ಸಮಸ್ಯೆಯ ವಿಚಾರ ತಿಳಿಸಿದರು. ಸಂಖ್ಯಾಪಂಡಿತ ನಕ್ಕು ಹೀಗೆಂದರು.
" ಸಾಲಿನಲ್ಲಿ ಒಬ್ಬರ ಹಿಂದೆ ಇನ್ನೊಬ್ಬರು ಹೋಗಲೇಬೇಕು, ಯಾರು ಮುಂದೆ ನಡೆದರೆ ಪಯಣ ಉತ್ತಮವಾಗಿರುತ್ತದೆ ಎಂದು ತಿಳಿದು ಮನ್ನಡೆಯಬೇಕು .ವಿಶ್ರಮಿಸಿ ಕೆಲಸಮಾಡುವುದಕ್ಕಿಂತ,ಕೆಲಸ ಮಾಡಿ ವಿಶ್ರಮಿಸುವುದು ಲೇಸು [ ಇಲ್ಲಿ ಎರಡು ಕೆಲಸದ ಪ್ರತೀಕ ಮತ್ತು ಸೊನ್ನೆ ವಿಶ್ರಾಮದ ಪ್ರತೀಕ ]. ಹಾಗಾಗಿ ಮೊದಲು ಎರಡು ಹೋಗಲಿ ನಂತರ ಸೊನ್ನೆ ಹೋಗಲಿ " ಎಂದರು.
ಇದನ್ನು ಸೊನ್ನೆ ಖಂಡಿಸಿತು. ಸಂಖ್ಯಾಪಂಡಿತರು ಉಪಾಯ ಮಾಡಿ , ಸೊನ್ನೆಗೆ ಕೇಳಿದರು :
ಸಪಂ : ಸೊನ್ನೆ, ನೀನು ಸಾಲಿನಲ್ಲಿ ಮೊದಲು ಹೋಗುವಾಗ, ಯಾರಾದರೂ ನಿನ್ನನ್ನು ತಡೆದು ಪ್ರಶ್ನೆಕೇಳಲಾಂಬಹಿಸಿದರೆ ಅವರ ಎಲ್ಲ ಪ್ರಶ್ನೆಗೂ ನಿನ್ನಲ್ಲಿ ಉತ್ತರ ಇದೆಯೇ ?
ಸೊನ್ನೆ : ಯಾರದೋ ಪ್ರಶ್ನೆಗೆ ನಾನೇಕೆ ಉತ್ತರಿಸಬೇಕು ?
ಸಪಂ : ಸಾಲಿನ ಮೊದಲಿಗ ನೀನು, ಅದಕ್ಕಾಗಿ ನೀನೇ ಉತ್ತರಿಸಬೇಕು
ಸೊನ್ನೆ : ಉತ್ತರಿಸಿದರಾಯಿತು , ಒಂದೆರಡು ಪ್ರಶ್ನೆ ಅಷ್ಟೇ!!
ಸಪಂ : ಒಂದೆರಡು ಅಥವಾ ಸಾವಿರೇರಡು ಹೇಳಲಾಗದು
ಸೊನ್ನೆ: [ ತಲೆಕೆಟ್ಟು ] ನನ್ನಿಂದ ಅಷ್ಟು ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ
ಸಪಂ : [ನಕ್ಕು ] ಅದು ನನಗೆ ತಿಳಿದಿದೆ, ಆದ್ದರಿಂದ ಎರಡು ಮುಂದೆ ಹೋಗಲಿ ಎಂದೆ .
ಸೊನ್ನೆ : [ ಅಸಹಾಯಕತೆಯಿಂದ ] ಆಯ್ತು, ನಾನು ಎರಡರ ಹಿಂದೆ ಹೋಗುತ್ತೇನೆ .
ಕೊನೆಗೆ ಎರಡರ ಹಿಂದೆ ಸೊನ್ನೆ ಹೋಗುತ್ತದೆ. ಇವರಂತೆ ಅವರ ಗೆಳೆಯರು ನಡೆಯುತ್ತಾರೆ.[ 2 0 2 0 ]. ಈ ಕಥೆ ಸರಳ, ಅಸಹಜ ಎನಿಸಬಹುದು ಆದರೆ ನಿಜಾಂಶ ತಿಳಿದಾಗ ಎಲ್ಲವೂ ವಿಸ್ಮಯವೇ.
ಈಗ ಅರ್ಥವಾಗಿರಬೇಕು ನನ್ನ ಶೀರ್ಷಿಕೆಯ ನಿಜರೂಪ.
ಹೊಸವರ್ಷಾಗಮನ, ಎರಡುಸಾವಿರದ ಇಪ್ಪತ್ತು [ 2020 - ಎರಡು ಸೊನ್ನೆ ಎರಡು ಎರಡು ]
ಈ ನವವರುಷ ಹರುಷಕೆ ಕನ್ನಡ ಬ್ಲಾಗ್ ಆರಂಭಿಸಿದ್ದೆನೆ. ಮನದಾಳದ ಮಾತುಗಳನ್ನು ಲೇಖನಿ ಹಿಡಿದು -ಹಾಳೆಯ ಮೇಲೆ ಮೂಡಿಸುತ್ತಿದ್ದ ನಾನು, ಇಂದು ಡಿಜಿಟಲ್ ಪೇಜ್ ನಲ್ಲಿ ಬರೆಯುತ್ತಿದ್ದೇನೆ. ಹೊಸದೊಂದು ಪ್ರಯತ್ನ ಹೊಸ ವರ್ಷದ ಜೊತೆಗೆ.
ಹಿಂದೆ ಬರೆದ ಹೊಸ ವರ್ಷದ ಕವನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. [ 2015ರಲ್ಲಿ ಬರೆದ ಕವನ ]
ನವ ವರುಷದ ಹರುಷ ನಿಮಗಾಗಲಿ
ನವಪುಸ್ತಕದ ಪುಟದಲಿ ನಗು ರಂಗೇರಲಿ
ಕನಸುಗಳೆಲ್ಲ ನನಸಾಗಿ ಜೀವತಾಳಲಿ
ಸಾರ್ಥಕತೆಯ ನೆಲೆ ನಿಮ್ಮ ಹುಡುಕಿ ಬರಲಿ…..
ಈ ವರ್ಷದ ಹಾದಿಯಲಿ ಸುರಿಯಲಿ ಹೂಮಳೆ
ಕೆಲಸದ ಉನ್ನತಿಯಲಿ ಬೆಳೆಯಲಿ ಹೊಂಬಾಳೆ
ಮೂಡಲೆಲ್ಲರಲಿ ಭರವಸೆಯ ಮಿಂಚಿನ ಕಳೆ
ಕಳೆಯ ನೆರಳಿನಲಿ ಚಿಗುರುತಿರೆ ಪ್ರಗತಿಯಬೆಳೆ…….
ಹಾಸುಹೊಕ್ಕಾಗಲಿ ನಮಲಿ ಉಪಕಾರದ ಗುಣ
ಸವಿಯೋಣ ಸಮಾಜ ಪ್ರೀತಿಯ ಸಿಹಿಹೂರಣ
ಜನ್ಮ ತಾಳಲಿ ನಮ್ಮಲಿ ವಿಶ್ವಭಾಂದವ್ಯದ ಭ್ರೂಣ
ಈ ವರ್ಷದ ಅಜಾರಾಮರಕೆ ಜಗ ಜನವೆ ಕಾರಣ….
- ಸುನಿತಾ

No comments:
Post a Comment