05 January 2020

ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ….

 
 ಉನ್ನತ ಶಿಕ್ಷಣಕ್ಕಾಗಿ ಕಷ್ಟಪಟ್ಟು ಓದಿ, ಮನದಲಿ ಸಾವಿರ ಆಸೆಗಳ ಬುತ್ತಿ ಕಟ್ಟಿ ,ಮನೆಯನ್ನು ಬಿಟ್ಟು ಹಾಸ್ಟೆಲ ಸೇರಿ ನಿಟ್ಟುಸಿರು ಬಿಡುವ ಸಾವಿರಾರು ವಿದ್ಯಾರ್ಥಿನಿಯರು ಸಾರ್ಥಕ ಬದುಕ ಜೀವಿಸುವ ಕನಸು ಕಾಣುತ್ತಾರೆ.ಮೊದ-ಮೊದಲು ಎಲ್ಲವು ಹೊಸದು,ತಂದೆ-ತಾಯಿಯ ಆಶ್ರಯದಲ್ಲಿ ಹಾಯಾಗಿ ಬೆಳದ ಹೆಣ್ಣು-ಮಕ್ಕಳಿಗೆ ಹೊರ ಪ್ರಪಂಚದ ಜ್ಞಾನ ಕಡಿಮೆ.ಇನ್ನು ಕೆಲ ವರ್ಷಗಳ ಕಾಲ ನಮ್ಮ ಜೀವನ ಹಾಸ್ಟೆಲನಲ್ಲಿ ಎಂದುಕೊಂಡು  ಹೊಸ ಸಂಬಂಧವನ್ನು ಹೊಸ ಗೆಳತಿಯರೊಂದಿಗೆ ಬೆಸೆಯುತ್ತಾ ಮನೆಯವರಿಂದ ದೂರ ಇರುವ ನೋವನ್ನು  ಸ್ನೇಹದಲ್ಲಿ ಮರೆಯುತ್ತಾರೆ.

ಹೊಸದರಲ್ಲಿ ಎಲ್ಲವು ಸೋಜಿಗ, ಬೆಳಿಗ್ಗೆ ಬೇಗನೆ ಎದ್ದು ,ಬಾತರೂಮ ಮುಂದೆ ಬಕೆಟ್ ಇಟ್ಟು ಕ್ಯೂನಲ್ಲಿ ನಿಂತು ಸ್ನಾನಮಾಡಿ ತಡವಾಗಿದೆ ಎಂದು ಚಡಪಡಿಸಿ ಸ್ವಲ ಟಿಫಿನ ಮಾಡಿ ಗೆಳತಿಯರೊಂದಿಗೆ ಕಾಲೇಜಿಗೆ ಹೊರಡುತ್ತಾರೆ.ಮದ್ಯಾಹ್ನ ಊಟಕ್ಕೆಂದು ಮತ್ತೆ ಹಾಸ್ಟೆಲಿಗೆ ಬರುತ್ತಾರೆ.ಕೈಯಲ್ಲಿ ಪ್ಲೇಟು ಹಿಡಿದು ಚಪಾತಿಗಾಗಿ ಕ್ಯೂ ಹಚ್ಚುತ್ತಾರೆ.ಸರದಿ ಸಾಲಿನಲ್ಲಿ ನಿಂತಾಗ ಏನೋ ಮುಜುಗರ ಎಲ್ಲರೂ ತನ್ನನೆ ನೋಡುತ್ತಿರುವರೆನೋ ಎಂಬ ಭಾವ.ಚಪಾತಿ ಸಿಕ್ಕ ನಂತರ ಪಲ್ಲವನ್ನು ಬಡೆಸಿಕೊಂಡು ಮನೆಯಿಂದ ತಂದ ಉಪ್ಪಿನಕಾಯಿ-ಚಟ್ನಿಯ ಜೊತೆ ಊಟವನ್ನು ಸವಿಯುತ್ತಾ ,ಅಡುಗೆ ಮಾಡಿದ ಸಿಬ್ಬಂದಿಗೆ ಕಮೆಂಟ್ ಕೊಡುತ್ತಾ ಊಟ ಮುಗಿಸುತ್ತರೆ.
ಊಟವಾದ ನಂತರ ರೂಮಗೆ ಬಂದು ಮುಂದೆನು ಎಂದು ಯೋಚಿಸುತ್ತಿರುವಾಗ ಅಮ್ಮನ ನೆನಪಾಗಿ,ಅವಳಿಗೊಂದು ಮಿಸ್ ಕಾಲ ಕೊಡೋಣ ಎಂದುಕೊಂಡು ಮಿಸಕಾಲ್ ಕೊಡುತ್ತಾರೆ.ಮಗಳ ಜೊತೆ ಮಾತಾಡಬೇಕೆಂಬ ಆಸೆಯಿಂದ ಮಗಳಿಗೆ ಕಾಲ್ ಮಾಡುತ್ತಾಳೆ.ಮಗಳು ”ಅಮ್ಮ ಇಲ್ಲಿ ನನಗೆ ನಿಂದೆ ನೆನೆಪು ನಿನ್ನ ಬಿಟ್ಟು ಇರಲಾರೆ ಅಮ್ಮ ನಾ ಊರಿಗೆ ಬರುವೆ” ಎಂದು ಫೋನಲ್ಲೆ ಅಳುತ್ತಾಳೆ. ಮಗಳ ಆಕ್ರಂದನಕೆ ನೊಂದ ತಾಯಿ ಮನದು:ಖವ ಮರೆಮಾಚಿ ಮಗಳಿಗೆ ಧೈರ್ಯ ತುಂಬಿ ,ತಾನು ಇನ್ನೆರೆಡು ದಿನದಲ್ಲಿ ಬರುವಂತೆ ತಿಳಿಸಿ ಕಾಲ್ ಕಟಮಾಡುತ್ತಾಳೆ.ಈಕಡೆ ಇವಳು ಅಳುತಿರುತ್ತಾಳೆ.ಇದನ್ನು  ನೋಡಿದ ಅವಳ ಸ್ನೇಹಿತೆಯರು ಅವಳ ನೋವ ಮರೆಸಲು ಹಾಸ್ಯಾಸ್ಪದ ಮಾತುಗಳನ್ನಾಡಿ,ಏನೇನು ಆಕ್ಟಿಂಗ ಮಾಡಿ ಕೊನೆಗು ಅವಳ ಮುಖದಲ್ಲಿ ಸುಂದರ ಮಂದಹಾಸವನ್ನು ತರುವಲ್ಲಿ ಯಶಸ್ವಿಯಾಗುತ್ತರೆ. ಎಲ್ಲರು ನಕ್ಕು-ನಕ್ಕು ಹೊಟ್ಟೆ ಹುಣ್ಣಾಗಿ,ಆಯಾಸದಿ ಹಾಸಿಗೆಯ ಮೇಲೆ ರಪ್ ಎಂದು ಬೀಳುತ್ತಾರೆ.ಕಣ್ಣು ತೆರೆದು ನೋಡಿದಾಗ ಕತ್ತಲು ತುಂಬಿದ ರೂಮು ಗೆಳೆತಿಯೊಬ್ಬಳು ಲೈಟ್ ಹಾಕಿದಾಗ ಸಮಯ ಸುಮಾರು ಆರುವರೆ ಎಲ್ಲರು ಎದ್ದು ಫ್ರೇಶ್ ಆಗಿ,ಟೀ ಕುಡಿಯಲು ಮೆಸ್ಸಗೆ ಬಂದಾಗ ಏಳು ಗಂಟೆ.ಅಲ್ಲಿರುವ ಅಂಟಿಯೊಬ್ಬಳಿಗೆ ಟೀ ಕೇಳಿದಾಗ ಅವಳು ”ಇನ್ನೊಂದು ಅರ್ದಾತಾಸ ಬಿಟ್ಟ ಬರ್ರಿ ಊಟಾನ ಕೊಡ್ತಿವಿ” ಎಂದು ಟೀಕೆ ಮಾಡುತ್ತಾಳೆ .ಟೀ ಲೋಟ  ಹಿಡಿದುಬಂದ ನಾವು ನಿರಾಸೆಯಿಂದ ರೂಮಗೆ ಬಂದು ಅವಳಿಗೆ ಮನಬಂದತೆ ಒಬ್ಬಬ್ಬರಾಗಿ ಬೈಯುತ್ತೇವೆ.



 ನಂತರ ಸ್ನೇಹಿತೆಯೊಬ್ಬಳು ”ಲೇ ಇವತ್ತು ಹೇಳಿದ ಸಿಸಿಪಿ ಕಾನ್ಸೆಪ್ಟ ನಿಮಗೆ ತಿಳಿತೆ” ಎಂದು ಪ್ರಶ್ನಿಸಿದಾಗ ಮನ ಭಾರವಾಗಿ ಪುಸ್ತಕ ತೆಗೆದು ಪುಟ ಹುಡುಕುತ್ತೇವೆ.ಅಷ್ಟರಲ್ಲಿ ಪಕ್ಕದ ರೂಮಿನ ಗೆಳತಿಯೊಬ್ಬಳು ಬಂದು “ಲೇ ನಾ ಹೊಸ ಮೊಬೈಲ ಕೊಂಡುಕೊಂಡೆ….ಹೇಗಿದೆ ಹೇಳಿ??” ಅಂದಾಗ ಮನದ ಭಾರ ಹಗುರವಾಗಿ “ಲೇ ಮಸ್ತ ಅದ ಯಾವಗ ತೆಗೆದುಕೊಂಡೆ?? ಎಷ್ಟು ಕೊಟ್ಟೆ ????  ಯಾವ-ಯಾವ ಅಪ್ಲಿಕೆಶನ ಇದಾವೆ??  ತೋರಿಸು” ಎಂದು ಮೊಬೈಲ ನೋಡುವುದರಲ್ಲೆ ಕಾಲ ಕಳೆದು ಹೊಗುತ್ತದೆ.ಸಮಯ ನೋಡಿದಾಗ ಸುಮಾರು ಒಂಬತ್ತುವರೆ ಮತ್ತೆ ಅವಸರದಿ ಪ್ಲೇಟು ಹಿಡಿದು ಮೆಸ್ಸಿಗೆ ಬಂದಾಗ ನಮಗಾಗಿ ಕಾಯುತ್ತಿದ್ದಂತೆ ನಿಂತ ವಾರ್ಡನ ನೋಡಿ ಅಂಜುತ್ತಾ ಅವರ ಬಳಿಕ ಹೋದಾಗ ಅವರು ಶಾಂತವಾಗಿ "ಎನ್ನು ಮು0ದೆ ಊಟಕ್ಕೆ ಬೇಗನೆ ಬನ್ನಿ” ಎಂದರು. ಇದ ಕೇಳಿದ ನಮಗೆ ಸಿಹಿ ತಿಂದಷ್ಟೆ ಸಂತಸವಾಯಿತು. ಸರದಿ ಎಲ್ಲದೆ ಚಪಾತಿ ತೆಗೆದುಕೊಂಡು ಬಂದು ಹೊಟ್ಟೆತುಂಬ ಊಟ ಮಾಡಿ ರೂಮಗೆ ಬಂದಾಗ ಸುಮಾರು ಹತ್ತು ಕಾಲು.ಮತ್ತೆ ಅಮ್ಮನಿಗೆ ಕಾಲ ಮಾಡಿ ತನ್ನ ಗೆಳತಿ ಹೊಸ ಮೊಬೈಲ ತೆಗೆದುಕೊಂಡ ವಿಚಾರ ತಿಳಿಸಿ ಅಪ್ಪನ ಯೋಗಕ್ಷೇಮ ತಿಳಿದುಕೊಂಡು ಕಾಲ ಕಟ ಮಾಡಿದಾಗ ಸಮಯ ಹತ್ತುವರೆ ಇನ್ನಾದರು ಓದಬೇಕು ಎಂದು ಪುಸ್ತಕ ತೆಗೆದು ಚಾಪ್ಟನ ಮೊದನ ಪ್ಯಾರಾ ಓದುವಷ್ಟರಲ್ಲಿ ಸಾಕಗಿ “”ಲೇ ಈ ಕಾನ್ಸಪ್ಟ ಅರ್ಥ ಆಗ್ತಿಲ್ಲ ರೂಮನಂಬರ 20 ಸೌಮ್ಯಾಗೆ ಎಲ್ಲವು ತಿಳಿದಿರುತ್ತದೆ ಅವಳ ಹತ್ತಿರ ಹೊಗೋಣ ಬಾ” ಎಂದು ರೂಮೆಟ್ಸ ಎಲ್ಲರು ಹೊಗುತ್ತೇವೆ.ಅವಳ ರೂಮಿಗೆ ಬಂದಾಗ ಅವಳ ರೂಮೆಟ್ಸ ಎಲ್ಲರು ಫಿಲ್ಮ ನೋಡುತಿರುತ್ತಾರೆ ಆಗ ನಾವು ಬಂದ ವಿಚಾರ ಮರೆತು “ಲೇ ಯಾವ ಫಿಲ್ಮ ನೋಡಾಕತ್ತಿರಿ ??” ಎಂದು ಕೇಳಿದಾಗ ಅವರು “ಇದಾ ಮೆರ್ರಿ ಕೋಮ  ನೋಡ್ತಾಯಿದಿವಿ ನೀವು ಬರ್ರಿ ನಾವು ಈಗ ಸ್ಟಾರ್ಟ ಮಾಡಿದಿವಿ” ಎಂದು ಹೇಳಿದಾಗ ನಮಗೂ ಹೊಸ ಫಿಲ್ಮ ನೋಡುವ ಆಸೆ ಎಲ್ಲರು ಕೂತು ಫಿಲ್ಮ ನೋಡುತ್ತೇವೆ. ಫಿಲ್ಮ ಮುಗಿದಾದ ಸಮಯ ನೋಡಿದಾಗ ಸಮಯ ಹನ್ನೆರಡು ಮುಕ್ಕಾಲು."ಅಬ್ಬಾ ಹೊತ್ತಾಯ್ತು ಎಲ್ಲರಿಗು ಗುಡನೈಟ” ಎಂದು ತಿಳಿಸಿ ರೂಮಗೆ ಬಂದು “ಲೇ ನಾಳೆ ಬೆಳಿಗ್ಗೆ ಬೇಗನೆ ಏಳೋನು  ಈಗ ಮಕ್ಕೋಳ್ಳಿ” ಎಂದು ಹೇಳಿ ಪುಸ್ತಕ ಮುಚ್ಚಿ ಬ್ಯಾಗಲ್ಲಿ ಇಟ್ಟು ಮಲಗುತ್ತೇವೆ.ಮತ್ತೇ ಬೆಳ್ಳಿಗೆ ಎದ್ದು ಅದೇ ರಾಗ ಅದೇ ಹಾಡು  "ದಿಸ್ ಇಸ್ ವಾಟ ವೀ ಗಲ್ರ್ಸ್ ಡು ಯಾಟ್ ಹಾಸ್ಟಲ"



No comments:

Post a Comment

ಜೀವನ ಸಾಗುತಿರೆ'