ಮಾನವ ಸಂಪೂರ್ಣ ವಿಕಸನಕೆ ಮತ್ತು ವಿನಾಶಕೆ ಮುಖ್ಯ ಕಾರಣವೆಂದರೆ ಅವನಲ್ಲಿ ಉಳಿದ ನೆನೆಪುಗಳು. ಇಂತಹ ಸಾವಿರ ನೆನಪುಗಳನ್ನು ಹೊತ್ತ ಕಾಲೇಜ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಉದಾಹರಣೆಗಳನ್ನು ನೋಡಲು-ಕೇಳಲು ಮನಸ್ಸು ಉತ್ಸುಕವಾಗುತ್ತದೆ.
ಕಾಲೇಜ ಕ್ಯಾಂಪಸ ಅಂದ ತಕ್ಷಣ ನಮ್ಮ ಮು0ದೆ ಕಾಣುವುದೆ ಸುಂದರವಾದ ಹುಡುಗಿಯರು-ಹುಡುಗರು ಮತ್ತು ಕ್ಯಾಂಪಸ ತುಂಬ ನಿಲುಗಡೆ ಮಾಡಿದ ವಿವಿಧ ವಾಹನಗಳು ,ಅಲ್ಲಿ-ಇಲ್ಲಿ ಕಾಣುವ ಹಚ್ಚ ಹಸಿರು ಗಿಡ-ಮರಗಳು, ಘೋರ ಯುದ್ದಕ್ಕೆಂದು ಹೊರಟಂತೆ ಕಾಣುವ ಲೆಕ್ಚರುಗಳು, ಮಿದುವಾಗಿ ಕೇಳುವ ಹುಡುಗಿಯರ ಪಿಸುಮಾತುಗಳು, ಸದ್ದಿನ ಗದ್ದಲದಲಿ ಗದ್ದಲಮಾಡುವ ವಿವಿಧ ರಿಂಗ್‍ಟೋನಗಳು. ಹೀಗೆ ಸಾವಿರಾರು ದೃಶ್ಯಗಳು ಕಣ್ಣಿನ ಅ0ಗಳದಲಿ ರಂಗವಲ್ಲಿ ಬಿಡಿಸುತ್ತವೆ. ಕೆಲ ಹುಡುಗರು ತಾವೇ ಹೀರೋ ಎಂಬಂತೆ ದೊಡ್ಡದಾದ ಗಾಡಿಯನೇರಿ ಮಹರಾಜನಂತೆ ಪೋಸು ಕೊಡುತ್ತಾರೆ. ಅದೆನೋ ಕಣ್ಣಿಗೆ ಗೊಗಲ ಹಾಕಿ ಜಗತ್ತನ್ನು ಅಂಧಕಾರದಿಂದ ನೋಡುತ ಬೀಗುವ ಹುಡುಗರು ಬಲು ಜಂಬಕೋರರು. ಹುಡುಗಿಯರೆನು ಕಮ್ಮಿ ಅಲ್ಲ, ಸುಂದರವಾದ ಕೇಶರಾಶಿಯನ್ನು ಹುಲ್ಲಿನಂತೆ ಹರಡಿ ಮೇಲೊಂದು ಗುಡ್ಡವನ್ನು ಇಟ್ಟು ,ಅಲ್ಲಿ-ಇಲ್ಲಿ ಕಬ್ಬಿನದ ಚೂರುಗಳನ್ನು ಸಿಕ್ಕಿಸಿರುತ್ತಾರೆ. ಜಗತ್ತೆ ಇವರನ್ನು ನೋಡುತ್ತಿದೆನೋ ಎಂಬಂತೆ ಮುಖದಲಿ ಕಿರುನಗೆಯನ್ನ ಕಾರಣವಿಲ್ಲದೆ ಪದೆ-ಪದೆ ನೀಡುತ್ತಾರೆ. ಮು0ಗುರುಳನು ಸರಿಸಿ-ಸರಿಸಿ ಹುಡುಗರ ಗಮನವನ್ನು ತಮ್ಮೆಡೆಗೆ ಸೆಳೆಯುತ್ತಾರೆ. ಸುಮ್ಮ-ಸುಮ್ಮನೆ ಕಾರಣವಿಲ್ಲದ ನಗು. ಒಂದು ಕಣ್ಣು ತನ್ನ ಗೆಳತಿಯನ್ನ ನೋಡ್ತಾ ಇದ್ರೆ, ಇನ್ನೊಂದು ಕಣ್ಣು ಹುಡುಗರ ಗುಂಪಿನೆಡೆ ನೋಡುತ್ತಿರುತ್ತದೆ.
ಮೊದಲೆರಡುವಾರ ಹುಡುಗ-ಹುಡುಗಿಯರು ಒಬ್ಬರಿಗೊಬ್ಬರು ಸಂಬಂಧವಿಲ್ಲದೆ ಬರಿ ಕಣ್ಣನೋಟದ ಸಿಗ್ನಲಗಳನ್ನು ಆಗಾಗ ಸೆಂಡ ಮಾಡುತಾರೆ. ನಂತರದ ವಾರಗಳಲ್ಲಿ ಮೆಲ್ಲನೆಯ ಮಾತುಗಳನ್ನು ಆಡಲು ಶುರು ಮಾಡುತ್ತಾರೆ. ದಿನ-ದಿನ ಕಳೆದಂತೆ ಸ್ನೇಹ ಗಟ್ಟಿಗೊಳ್ಳುಟ್ಟದೆ. ಸ್ನೇಹದ ಅಮಲಿನಲಿ ಭಾಂದವ್ಯ ಬೆಸೆಯುತ್ತ ಹೊಸ ಸ್ನೇಹ ಪ್ರಪಂಚವನ್ನು ಸೃಷ್ಠಿಸುತ್ತಾರೆ. ಸ್ನೇಹ ಹಾದಿಯಲಿ ವಿದ್ಯಭ್ಯಾಸ,ಮುನ್ನಡೆ-ಹಿನ್ನಡೆ ಎಲ್ಲವನ್ನು ಸಮಾನವಾಗಿ ಸ್ವೀಕರಿಸುತ್ತಾರೆ. ಸ್ನೇಹವೆಂದರೆ ಒಂದು ಬಲ. ಸ್ನೇಹಬಲದಲಿ ಜೀವನದ ಯಾವುದೇ ಸಮಸ್ಯೆಯನ್ನು ನಿರ್ಭಯವಾಗಿ ಸರಿಪಡಿಸುವ ಅತ್ಮಸ್ಥೈರ್ಯ ನಮ್ಮಲ್ಲಿ ಬೆಳೆದಿರುತ್ತದೆ. ನೋವಾದಾಗ-ಸಂತಸವಾದಾಗ ಗೆಳೆಯರೊಂದಿಗೆ ಹೊರಗಡೆ ಹೋಗಿ ನಮ್ಮ ಮನದ ಅಣಕು-ಮೊಣಕುಗಳನ್ನು, ಸಂತೋಷ-ಹರ್ಷಗಳನ್ನು ಹಂಚಿಕೊಂಡರೆ ಮನ ಹಗುರವಾಗಿ ಮುಂದಿನ ಕೆಲಸ ಮಾಡಲು ಅಣಿಗೊಳ್ಳುತ್ತದೆ. ಕೆಲವೊಮ್ಮೆ ಸ್ನೇಹಿತರು ಎಷ್ಟು ಹೊಂದಿಕೊಂಡಿರುತ್ತಾರೆಂದರೆ ತಮ್ಮಲ್ಲಿರುವ ಭಾವನೆಗಳನ್ನು ಅಮ್ಮನ ಮುಂದೆ ಹೇಳಿಕೊಳ್ಳುವುದಕ್ಕಿಂತ ಸ್ನೇಹಿತ-ಸ್ನೇಹಿತೆಯ ಮುಂದೆ ಹೇಳಿದರೆ ಒಳ್ಳೆಯದು ಎನಿಸುತ್ತದೆ. ಸ್ನೇಹವೃಂದವು ಸಂತಸದ ನೆನಪುಗಳಿಗೊಸ್ಕರ ಸುಂದರ ಜಾಗಗಳಿಗೆ ಭೇಟಿ ನೀಡಿ ಅಲ್ಲಿ ತಾವು ತಮ್ಮ ಯವ್ವನಾವಸ್ಥೆಯ ಕೆಲವು ದಿನಗಳನ್ನು ಕಳೆದೆವೆಂದು ನೆನಪು ಅಚ್ಚ-ಅಳಿಯದಂತೆ ಮನದ ಮೂಲೆಯಲಿ ಈ ಪ್ರವಾಸದ ಬೆಳಕನ್ನು ಉಜ್ವಲಿಸುತ್ತಾರೆ. ಕಾಲೇಜಿನಲಿ ಪಾಠ, ಪಾಠದ ಜೊತೆ ಊಟ, ಊಟದ ಜೊತೆ ಆಟ, ಆಟದ ಜೊತೆ ಸ್ನೇಹದ ಒಡನಾಟ. ಹೀಗೆ ಕಾಲೇಜು ದಿನಗಳು ಸ್ನೇಹವೆಂಬ ನೆನಪಿನಲಿ ಮುಗಿಯುತ್ತೇನೋ ಎಂಬ ಕುರುಹೂ ಮನದಲಿ ಮೂಡುತ್ತದೆ. ಆದರೆ ಸ್ನೇಹದ ದಾಹದಲಿ ಪ್ರೀತಿಯ-ಬಾ0ಂವ್ಯಗಳ ಮಧುರ ಹೂರಣ ತುಂಬಿ ಜೀವನ ಸಿಹಿಯಾದ ಹೋಳಿಗೆಯಾಗಿ ಅನುಭವಿಸುವವರ ಪಾಲಿನ ನೈವೆಧ್ಯವಾಗುತ್ತದೆ. ಮರೆಯಲಾಗದ ಜಗದಲಿ ಮರೆಯಾಗುವ ತನಕ ಮನದ ಮಾತ ಕೇಳಿ ಸ್ನೇಹದರಮನೆಗೆ ಹೋಗೋಣಾ ಅತಿಥಿಯಾಗಿ,ಅರಮನೆಯ ಆಚಾರವರಿತು ಬಾಳೋಣಾ ರಾಜಾ-ರಾಣಿಯಾಗಿ.
- ಸುನಿತಾ
No comments:
Post a Comment