ಬದುಕಿನ ಚಿತ್ರಣದಲಿ ಹೊಸ ಬಣ್ಣದ ಅನುಭವಗಳನ್ನು ಮೂಡಿಸುವ ಭಾಗಗಳೆಂದರೆ ಪ್ರಯಾಣದ ದಿನಗಳು.ಇಂತಹ ದಿನಗಳು ಬದುಕಿಕೆ ಹೊಸ ಪ್ರೇರಣೆ,ಉತ್ಸಾಹ ಮತ್ತು ಸಂತೋಷಗಳನ್ನು ನೀಡುತ್ತವೆ.ಕೆಲವೊಬ್ಬರ ಜೀವನ ಪ್ರಯಾಣದಲ್ಲಿ ಮುಗಿದುಬಿಡುತ್ತದೆ.ಮೆಟ್ರೊ ಸಿಟಿ ಎಂದು ಕರೆಸಿಕೊಳ್ಳುವ ನಗರಗಳಲ್ಲಿ ಜನರ ಜೀವನ ಪ್ರಯಾಣದಿಂದಲೆ ಶುರುವಾಗುತ್ತದೆ.
ಪ್ರಯಾಣದ ನಿಜ ಅನುಭವ ಪಡೆಯಬೇಕಾದರೆ ರೈಲು ಪ್ರಯಾಣ ಹೊಸ ಜೀವನ-ಪರಿಚಯದೊಂದಿಗೆ ಬದುಕಿನ ಬಂಡಿಗೆ ನವತಿಳಿಯನ್ನು ಬಡಿಸುತ್ತದೆ.ನಮ್ಮ ಉತ್ತರ ಕನ್ನಡದ ಪ್ರದೇಶವನ್ನಾರಿಸಿದರೆ ಹರಿಪ್ರಿಯಾ ಎಕ್ಸಪ್ರೆಸ್,ಹುಬ್ಬಳ್ಳಿ ಪ್ಯಸೆಂಜರ,ಸೊಲ್ಲಪುರ ಎಕ್ಸಪ್ರೆಸ್ಸ್ ಇತರೆ ರೈಲುಗಳು ಇಲ್ಲಿಯ ಜೀವನ ಶೈಲಿಗೆ ಉದಾಹರಣೆಗಳನ್ನು ಬಿಂಬಿಸುತ್ತವೆ.
ಸೊಲ್ಲಪುರ ಎಕ್ಸಪ್ರೆಸ್ಸ್ ,ಇದು ಸೊಲ್ಲಾಪುರ,ಇಂಡಿ,ಬಿಜಾಪುರ್,ಬಾಗಲಕೊಟೆ ,ಗದಗ,ಹುಬ್ಬಳ್ಳಿ ಮತ್ತಿತರೆ ಸ್ಠಳಗಳಿಗೆ ಭೇಟಿ ನೀಡಿ ,ತನ್ನ ಮಡಿಲ ಮಕ್ಕಳನ್ನು ದಡ ಸೇರಿಸಿ ತನ್ನದೆ ಆದ ಶೈಲಿಯಲ್ಲಿ “”ಕ್ಞೂಂಂ ಂ ” ಎಂದು ವಿದಾಯ ಹೇಳುತ್ತದೆ.ರೈಲಿನಲ್ಲಿ ಆ ಮಕ್ಕಳ ಮಾತು, ಆಟ, ಪೀಕಲಾಟ, ಜಗಲಾಟ ಎಲ್ಲವು ವಿವಿಧ ರೀತಿಯ ಮುನ್ನುಡಿಗಳಿಗೆ ಸಹಿ ಹಾಕುತ್ತವೆ.ಮೊದಲೆ ಹೇಳಿದಂತೆ ಇದು ಉತ್ತರ ಕರ್ನಾಟಕ ಮಂದಿಯನ್ನೊಳಗೊಂಡ ರೈಲು,ನಮ್ಮಕಡೆ ಮಂದಿ ಮಾತಿನಲಿ ಸ್ವಲ್ಪ ಖಡಕು, ಆದರೆ ಮನದಾಳ ಪ್ರೀತಿ,ನಂಬಿಕೆ ಮತ್ತು ಕರುಣೆಯಲಿ ಇವರ ಮೀರಿಸುವವರಿಲ್ಲ.
ನನ್ನ ಅನುಭವಗಳನ್ನು ಹೇಳುತ್ತಾ ಹೋದರೆ ದಿನವೆ ಸಾಲದು ಅದರಲ್ಲಿ ಆಯ್ದ ಕೆಲ ಹಾಸ್ಯಾಸ್ಪದ ಘಟನೆಗಳನ್ನು ಹಂಚಿಕೊಳ್ಳಲು ಖುಷಿಯನಿಸುತ್ತದೆ. ವಿದ್ಯಾನಗರಿ ಬಾಗಲಕೋಟೆ ಇಂದ ನನ್ನ ನೆಲೆ ಗದಗಗೆ ಪ್ರಯಾಣ ಮಡುವುದು ನನ್ನ ವಾರರೂಢಿಯಾಗಿಬಿಟ್ಟಿದೆ. ಸಾಮಾನ್ಯವಾಗಿ ಮಧ್ಯಾನ 4:20 ನಿಮಿಷಕ್ಕೆ ಬರುವ ಸೊಲ್ಲಾಪುರ ಎಕ್ಸಪ್ರೆಸ್ಗೆ ಹೊಗುತ್ತೇನೆ.ಅದು ಯಾವಾಗಲು ಕಿಕ್ಕಿರಿದ ಜನಗಳನ್ನು ಹೊತ್ತೆ ಸಾಗುತ್ತಿರುತ್ತದೆ. ಎಂದೂ ಸಮಯಕ್ಕೆ ಸರಿಯಾಗಿ ಬರಲ್ಲ ಎಂಬುದು ನನ್ನ ಗಾಢ ನಂಬಿಕೆ.ನನ್ನ ತಂದೆ ನನ್ನ ಜೊತೆ ಸ್ಟೆಶನಗೆ ಬರುತ್ತಿದ್ದರು ರೈಲು ಬರುವವರೆಗು ಕಾದು, ಅದು ಬಂದ ನಂತರ ತಾವೆ ಮೊದಲು ಪ್ರವೇಶ ಮಾಡಿ ನನಗಾಗಿ ಒಂದು ಸೀಟನ್ನು ಕಾಯ್ದಿರಿಸಿ ನನ್ನ ಕರೆದು ಅಲ್ಲಿ ಕುಡಿಸುತ್ತಿದ್ದರು.ರೈಲು ಬಿಡುವ ಸಮಯಕ್ಕೆ ಅಕ್ಕಪಕ್ಕದ ಆಂಟಿಗೊ ಅಥವಾ ಅಂಕಲಗೊ ಅಥವಾ ಯಾರಾದರು ಹಿರಿಯರಿದ್ದರೆ ಅವರಿಗೆ ನನ್ನ ಬಗ್ಗೆ ಕಾಳಜಿ ವಹಿಸುವಂತೆ ಹೇಳುತ್ತಿದ್ದರು.ಇಷ್ಟು ಹೇಳಿ ನನ್ನ ತಂದೆ ಹೋಗಿಬಿಡುತ್ತಿದ್ದರು.ನಾನು ರೈಲು ಶುರುವಾಗಿ ಸ್ಟೆಷನ ಮರೆಯಾಗುವವರೆಗೆ ನನ್ನ ತಂದೆಯ ಚಲನವನ್ನೆ ನೋಡುತ್ತಿದ್ದೆ. ಮನದಲ್ಲಿ ಕಳವಳ ಮನೆಯಲ್ಲಿ ಹಾಯಗಿದ್ದ ನನಗೆ ಈ ಬಾಗಲಕೋಟೆಯ ಕಲಿಕೆ ಬೇಸರವನ್ನು ತಂದಿತ್ತು. ಸ್ವಲ್ಪ ಸಮಯದ ನಂತರ ನನ್ನ ಪಕ್ಕದಲ್ಲಿ ಕುಳಿತಿದ್ದ ಒಬ್ಬ ಅಜ್ಜಿ ನನ್ನನ್ನು ಪ್ರಶ್ನಿಸಿದಳು “ಎಲ್ಲಿಗೆ ಹೊಂಟಿ ಬೇ” ಎಂದು.ನಾನು “ಬಾಗಲಕೋಟೆಗೆ” ಎಂದೆ. ಅವಳು ಮತ್ತೆ “ನಿಮ್ಮ ನೆಂಟರಮನಿಗೆ ಹೊಂಟಿಯನ್ ಬೇ” ಎಂದಳು. ನಾನು “ಎಲ್ರಿ ಅಜ್ಜಿ ಅಲ್ಲಿ ಕಲಿತಿನಿ, ಅದಕ್ಕ ಹೊಂಟಿನಿ” ಎಂದೆ. ಅವಳು ಬಿಡದೆ ಮತ್ತೆ ಕೇಳಿದಳು “ಎಸ್ಟನೇತ್ತಾ ಓದ್ತಿಯವ್ವಾ” ಎಂದಳು.
ನಾನು ಅವರಿಗೆ ಎನ ಹೇಳಲಿ ಅವರಿಗೆ ಇಂಜಿನಿಯರಿಂಗ ಅಂದರೆ ತಿಳಿಯುತ್ತೋ ಇಲ್ಲವೋ ಎಂದು ಅನುಮಾನಿಸಿ ತೊದಲತೊಡಗಿದೆ ನನ್ನ ನೋಡಿದ ಅವಳು “”ಯ್ಯಾಕ ಬೇ ಏನಾತ ಬಾಗಲಕೋಟ್ಯಾಗ ಯಾವದ ದೊಡ್ಡ ಶಾಲಿ ಐತಿ ಅಂತಲ್ಲ ಅಲ್ಲೆ ಹೊಂಟಿಯಿಲ್ಲ ನೀ” ಎಂದಳು. ನಿರಾತಂಕಳಾಗಿ ಉತ್ತರಿಸಿದೆ " ಹೌದ್ರಿ ಹೌದ್ರಿ ಅಜ್ಜಿ " . ಬಿಡದ ಅಜ್ಜಿ ಮತ್ತೆ ಪ್ರಶ್ನಿಸಿದಳು “ಮತ್ತ ಅಲ್ಲೆ ಯಾರ ಮನ್ಯಾಗ ಇರ್ತಿವಾ ನೀ” ಎಂದಳು. ಆಗ ನಾನು “ಅಲ್ಲಿ ವಸತಿಗ್ರಹ ಐತ್ರಿ ಅದರಾಗ ಇರ್ತಿನಿ” ಎಂದೆ. ಅಸ್ಟಕ್ಕೆ ಸುಮ್ಮನಿರದ ಅಜ್ಜಿ “ಅಲ್ಲಿ ಊಟ ಚೊಲೊ ಕೊಡತಾರನ್ವಾ” ಎಂದಳು. ನಾನು ಮಾತನಾಡಲು ಬೇಜಾರಾಗಿ ಊ000 ಅನ್ನುವಂತೆ ಅಲ್ಲಾಡಿಸಿದೆ. ಆಷ್ಟರಲ್ಲಿ ಆ ಅಜ್ಜಿಯ ಊರು ಬಂತು. ಅದನ್ನೆ ಕಾಯುತ್ತಿದ್ದ ನಾನು ಆ ಅಜ್ಜಿಗೆ “ಅಜ್ಜಿ ನಿಮ್ಮ ಊರು ಬಂತು” ಎಂದೆ. ಅಜ್ಜಿ ತನ್ನ ಚೀಲವನ್ನು ತೆಗೆದುಕೊಂಡು ಟ್ರೇನ್ನಿಂದ ಇಳಿಯುವಾಗ “ನಾ ಬರ್ತಿನಿ ಬೇ ನನ್ನ ಮೊಮ್ಮಕ್ಕಳ್ಳನ್ನು ನೀ ಕಲ್ಯಾಕತ್ತಿಯಲ್ಲ ಅದ ಶಾಲಿಗೆ ಹಾಗ್ತಿನಿ. ನಾವಂತು ಒದ್ಲಿಲ್ಲಾ ನಮ್ಮ ಮಕ್ಕಲಾದ್ರು ಓದ್ಲಿ. ಒಳ್ಳೆದಾಗ್ಲಿ ನಿಂಗ” ಅಂತ ಹರಿಸಿ ರೈಲಿನಿಂದ ಇಳಿದಳು. ಆ ಅಜ್ಜಿಯ ಕಣ್ಣಲ್ಲಿ ಹೊಸ ಭರವಸೆಯ ಛಾಯೆಯೊಂದು ಮೂಡಿ ಬೆಳಕನ್ನು ಹೊರಗೆ ಸೂಸುತ್ತಿತ್ತು. ಆ ತಕ್ಷಣ ನನ್ನ ಮನದಲಿ ನನ್ನ ತಂದೆ-ತಾಯಿಯ ಚಿತ್ರ ಮೂಡಿ ದೈವ ಭಾವನೆ ನನ್ನಲಿ ರೂಪತಾಳಿ ದನ್ಯವಾದ ಹೇಳಬೇಕು ಎನಿಸಿತು.ಅಜ್ಜಿಯ ಆಸೆ ಪೂರೈಸಲಿ ಎಂದು ಮನದಲಿ ಹಾರೈಸಿ,ನನ್ನ ನಿಲುಗಡೆ ಸ್ಥಳಕ್ಕಾಗಿ ಕಾದು ಕೂತೆ.
ಪ್ರಯಾಣ ಹಳೆಯದಾಗಿರಬಹುದು, ಆದರೆ ಅನುಭವ ಹೊಸದಾಗಿತ್ತು. ರೈಲು ಮತ್ತೆ ತನ್ನದೆ ವಿಶೇಷ ರೀತಿಯಲ್ಲಿ ಕೂಗುತ್ತಾ ಜನರನ್ನು ತನ್ನೊಳಗೆ ಕರೆದುಕೊಂಡು, ತನ್ನೊಳಗಿನಿಂದ ಜನರನ್ನು ಇಳಿಸಿ ಸಂತಸದ ಕೂಗನ್ನು ಹೊರಡಿಸುತ್ತಿತ್ತು. ಸದ್ದು-ಗದ್ದಲಗಳ ನಡುವೆ ನನ್ನ ಈ ಪಯಣ ಮಜವಾಗಿತ್ತು.
- ಸುನಿತಾ
ಬಣ್ಣದ ಲೋಕದ ಬರಹಗಾರ್ತಿ��
ReplyDelete