ಸಮೂಹ ಮಾಧ್ಯಮದ ಜೊತೆ ಸೋಲಿರದ ಸಂಬಂಧ ಬೆಸೆಯುತ್ತಾ, ಮಾನವ ತನ್ನ ಜನಾಂಗದ ಸಂಬಂಧಗಳನ್ನು ಬೆಳೆಸುತ್ತಿದ್ದಾನೆ. ಸಮೂಹಮಾಧ್ಯಮಗಳು ಸಹಜತೆ ಮತ್ತು ಅಸಹಜತೆಯ ಚಿತ್ರಗಳನ್ನು ಮನಮುಟ್ಟುವಂತೆ ಪ್ರೇಕ್ಷಕರನ್ನು ರಂಜಿಸುತ್ತವೆ. ನೈಜಕಥೆ ಆಧಾರಿತ ಚಿತ್ರಗಳಂತೂ ನೋಡುಗರ ಕಣ್ಣರಳಿಸುತ್ತವೆ.ಈ ರೀಲ್ ಮತ್ತು ರೀಯಲ ಕಥೆಗಳು ಕೆಲವರ ಬಾಳಿನಲ್ಲಿ ಮಾದರಿಯಾದರೆ ಇನ್ನೊಬ್ಬರ ಜೀವನದಲ್ಲಿ ಕಂಟಕವಾಗಿ ಉಳಿದು ಬಿಡುತ್ತವೆ.
ನನ್ನ ಬಿಡುವಿನ ಸಮಯದಲ್ಲಿ ಕೋರಿಯನ್ ಭಾಷೆ ಆಧಾರಿತ ಎಫ್-ಫೋರ ಎಂಬ ಧಾರಾವಹಿಯನ್ನು ನೋಡ ತೊಡಗಿದೆ. ಕಥೆ ತುಂಬಾ ಹಿಡಿಸಿತು. ಸರಣಿ ಕಥೆಗಳನ್ನು ವಿಕ್ಷೀಸುತ್ತಾ ಹೋದೆ. ಅದರಲ್ಲಿರುವ ಸಂಭಾಷಣೆ ತುಂಬಾ ಇಷ್ಟವಾಯಿತು. ಶ್ರೀಮಂತ ಮನೆತನದಲ್ಲಿ ಬೆಳೆದ ಬಲು ಜಂಭಕೋರರಾದ ನಾಲ್ಕು ತರುಣರ ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಮೊದಲ ವ್ಯಕ್ತಿ ಈ ಧಾರವಾಹಿಯ ಕಥಾನಾಯಕಿ. ಕಥಾನಾಯಕಿ ಅಗಸ ಕುಟುಂಬಕ್ಕೆ ಸೇರಿದವಳು.ಇವಳದು ತುಂಬಾ ಬಡ ಕುಟುಂಬ. ಇವಳು ಒಂದು ಹೋಟಲ್ ನಲ್ಲಿ ಕೆಲಸಮಾಡಿ ಆರ್ಥಿಕವಾಗಿ ತನ್ನ ತಂದೆಗೆ ಸಹಾಯ ಮಾಡುತ್ತಿರುತ್ತಾಳೆ. ಒಂದು ದಿನ ಎಫ್-ಫೋರನ ಮುಖ್ಯ ನಾಯಕ ಈ ನಾಯಕಿಯ ಗೆಳತಿಗೆ ಸಣ್ಣ ತಪ್ಪಿಗಾಗಿ ಅವಮಾನಿಸುತ್ತಾನೆ.ಇದನ್ನು ಸಹಿಸದ ನಾಯಕಿ ನಾಯಕನಿಗೆ ಮರು ಅವಮಾನಿಸಿ ಅವನಿಗೆ ಬುದ್ದಿ ಪಾಠ ಹೇಳುತ್ತಾಳೆ. ಈ ಘಟನೆಯಿಂದ ಆಕ್ರೋಶಗೊಂಡ ನಾಯಕ, ನಾಯಕಿಗೆ ವಿವಿಧ ತೊಂದರೆಗಳನ್ನು ಕೊಡುತ್ತಾನೆ. ಅಂಜದ ನಾಯಕಿ ಕಣ್ಣಿರುಣ್ಣುತ್ತಾ, ಎಲ್ಲ ತೊಂದರೆಗಳನ್ನು ಎದುರಿಸುತ್ತಾಳೆ. ಈ ಧೈರ್ಯದ ಹುಡುಗಿಯ ಮೇಲೆ ನಾಯಕನಿಗೆ ಪ್ರೀತಿ ಹುಟ್ಟುತ್ತದೆ. ಹೀಗೆ ಕಥೆ ಮುಂದುವರೆಯುತ್ತದೆ. ಅವರ ಪ್ರೀತಿಗೆ ಸಾಕಷ್ಟು ಅಡೆತಡೆಗಳು ಬರುತ್ತವೆ. ಅವುಗಳನ್ನೆಲ್ಲಾ ನಿಭಾಯಿಸುತ್ತಾ ಈ ಜೋಡಿ ನಡೆಯುತ್ತದೆ. ಈ ಕಥೆಯಲ್ಲೆನು ಹೊಸತನವಿಲ್ಲ ಆದರೆ ಸಾಮಾಜಿಕವಾಗಿ ಪರಿಗಣಿಸಿದರೆ ಇಂತಹ ಕಥೆಗಳು ನಿಜವಾಗುವುದು ಯಾವಾಗ ಎಂಬ ಪ್ರಶ್ನೆ ನೋಡುಗನ ಮನದಲಿ ಉಳಿದಿರುತ್ತವೆ.
ಈ ಕಥೆಗಳ ಸಾರಾಂಶವನ್ನು ನೋಡಿದರೆ, ಬರಿ ರೀಲ್ ಅನಿಸುತ್ತದೆ. ಇವುಗಳನ್ನು ರಿಯಲ ಮಾಡಲು ಶ್ರೀಮಂತ ವ್ಯಕ್ತಿಗಳೆಕೇ ಮುಂದಾಗಬಾರದು. ಶ್ರೀಮಂತರು-ಶ್ರೀಮಂತರನ್ನೇ ಮದುವೆಯಾದರೆ ಏನು ಪ್ರಯೋಜನ? ಅದೆ ಶ್ರೀಮಂತರು ಬಡವರನ್ನು ಮದುವೆಯಾದರೆ ಬಡವರ ಆರ್ಥಿಕ ಸ್ಥಿತಿಯಾದರು ಹೆಚ್ಚುತ್ತದೆ ಹಾಗೂ ಬಡತನದ ಕಹಿ ಸತ್ಯಗಳು ಅರ್ಥವಾಗುತ್ತವೆ.ಶ್ರೀಮಂತ ಕುಟುಂಬದಲ್ಲಿ ಬೆಳೆದ ಹೆಣ್ಣಾಗಲಿ/ಗಂಡಾಗಲಿ ಯಾಕೆ ಈ ತರಹದ ಬಾಳ-ತಿರುವುಗಳನ್ನು ಅನುಭವಿಸಬಾರದು.ಬರಿ ಐಶಾರಾಮಿ ಜೀವನ ಸಾಗಿಸುವುದಲ್ಲಿ ಫಲವಿಲ್ಲ.ಕಷ್ಟಪಟ್ಟು ಫಲಗಿಟ್ಟಿಸುವ ಬಡವನ ಜೊತೆ ಕೆಲಸಮಾಡಿದಾಗ ಮಾತ್ರ ಅನ್ನದ ಬೆಲೆ ಗೊತ್ತಾಗುತ್ತದೆ. ಜೀವನದಲಿ ಪ್ರೀತಿ ಇನ್ನೊಬ್ಬರ ಕೀರ್ತಿಗೆ ಸಹಾಯವಾಗಲಿ. ನಿಮ್ಮ ಪ್ರೀತಿ ಇನ್ನೊಬ್ಬರ ಜೀವನಾಧಾರವಾಗಲಿ.
- ಸುನಿತಾ
No comments:
Post a Comment